Just in
Home / Kannada / ಮಡಿಕೇರಿ ತಾಲ್ಲೂಕು ಈಗ ಹೊಸದಾಗಿ 01 ಕೋವಿಡ್ ಸೋಂಕು ಪ್ರಕರಣ

ಮಡಿಕೇರಿ ತಾಲ್ಲೂಕು ಈಗ ಹೊಸದಾಗಿ 01 ಕೋವಿಡ್ ಸೋಂಕು ಪ್ರಕರಣ

Spread the love

ಕೊಡಗು ಜಿಲ್ಲೆಯಲ್ಲಿ ಈಗ ಹೊಸದಾಗಿ 01 ಕೋವಿಡ್ ಸೋಂಕು ಪ್ರಕರಣ ವರದಿಯಾಗಿದೆ. ವಿವರ ಕೆಳಕಂಡಂತಿದೆ.

ಮಡಿಕೇರಿ ತಾಲ್ಲೂಕು ಎಮ್ಮೆಮಾಡು ಗ್ರಾಮದ ನಿವಾಸಿಯಾಗಿರುವ 35 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಇವರು ಸೌದಿ ಅರೇಬಿಯಾದಿಂದ ಹಿಂತಿರುಗಿದವರಾಗಿದ್ದು, ನೇರವಾಗಿ ಇವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿರುವುದರಿಂದ ಹೊಸದಾಗಿ ನಿಯಂತ್ರಿತ ಪ್ರದೇಶ ತೆರೆದಿರುವುದಿಲ್ಲ.

ಕೋವಿಡ್ ಸೋಂಕು ದೃಢಪಟ್ಟಿದ್ದ ಸೋಮವಾರಪೇಟೆ ತಾಲ್ಲೂಕು ನೆಲ್ಲಿಹುದಿಕೇರಿ ಗ್ರಾಮದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ ಈ ಹಿಂದೆ ಸೋಂಕು ದೃಢ ಪಟ್ಟ 32 ವರ್ಷದ ವ್ಯಕ್ತಿಯು ಗೋಣಿಕೊಪ್ಪದ ಕೆ.ಇ.ಬಿ ರಸ್ತೆಯಲ್ಲಿರುವ ಮನೆಯಲ್ಲಿ ತಂಗಿದ್ದ ಕಾರಣ ಗೋಣಿಕೊಪ್ಪದ ಕೆ.ಇ.ಬಿ ರಸ್ತೆಯಲ್ಲಿ ಹೊಸದಾಗಿ ನಿಯಂತ್ರಿತ ಪ್ರದೇಶವನ್ನು ತೆರೆಯಲಾಗಿದೆ.

ಹೀಗಾಗಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ:47 ಕ್ಕೇರಿದ್ದು, 03 ಪ್ರಕರಣ ಬಿಡುಗಡೆಗೊಂಡಿರುತ್ತಾರೆ. 44 ಪ್ರಕರಣಗಳು ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿರುವ ನಿಯಂತ್ರಿತ ಪ್ರದೇಶಗಳ ಸಂಖ್ಯೆ ಒಟ್ಟು-22 ಆಗಿರುತ್ತದೆ.

ಜಿಲ್ಲಾಧಿಕಾರಿ,
ಕೊಡಗು ಜಿಲ್ಲೆ, ಮಡಿಕೇರಿ.

Leave a Reply

Your email address will not be published.

x

Check Also

ಕೋಮುಪ್ರಚೋದಕ ಹೇಳಿಕೆಗಳಿಗೆ ನಾಲಗೆ ಹರಿಯ ಬಿಡುವುದರಲ್ಲಿ ಹೆಸರುವಾಸಿ ಕೆ.ಎಸ್. ಈಶ್ವರಪ್ಪ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ

Spread the love August 6 Time: 15:00 ಶಿವಮೊಗ್ಗ: ನಗರದ ಆಂಜನೇಯ ದೇವಸ್ಥಾನಕ್ಕೆ ಭೇಟಿ ...

ರಾಯಚೂರು: ಕಟ್ಟಡ ಕಾರ್ಮಿಕರಿಗೆ ನೀಡುತ್ತಿರುವ ಮಾಶಾಸನದಂತೆ ನಮ್ಮ ಸಮಾಜದವರಿಗೆ ಏನೂ ನೀಡುತ್ತಿಲ್ಲ: ಮಡಿವಾಳ ಸಮಾಜ

Spread the love August 6 Time: 14:54 ರಾಯಚೂರು: ಕರ್ನಾಟಕ ರಾಜ್ಯ ಮಡಿವಾಳ ಮಾಚಿದೇವ ...

ರಾಯಚೂರು: ಬ್ಯಾಂಕ್ ಸಿಬ್ಬಂದಿಯ ಸಾವು, ಅನೈತಿಕ ಸಂಬಂಧ ಆರೋಪ ; ತನಿಖೆಗೆ ಒತ್ತಾಯ

Spread the love ರಾಯಚೂರು: ತಾಲ್ಲೂಕಿನ ತುಂಗಭಧ್ರಾ ಕ್ಯಾಂಪ್ ಗ್ರಾಮದ ಇಂದಿರಾ ಅವರು ನಗರದ ಆಶಾಪುರ ...

error: Content is protected !!