Home / News / Malnad / Kodagu / ವಕೀಲರಿಂದ ಕಲಾಪ ಬಹಿಷ್ಕಾರ

ವಕೀಲರಿಂದ ಕಲಾಪ ಬಹಿಷ್ಕಾರ

by malnadnews 7-9-14

ಕುಶಾಲನಗರ : ನ್ಯಾಯಾಂಗ ಶುಲ್ಕ ಪಾವತಿಯ ಬಗ್ಗೆ ರಾಜ್ಯ ಸರಕಾರ ಹೊರಡಿಸಿರುವ ಅಧಿಸೂಚನೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಇಲ್ಲಿನ ವಕೀಲರ ಸಂಘದ ವತಿಯಿಂದ ನ್ಯಾಯಾಲಯದ ಕಲಾಪವನ್ನು ಬಹಿಷ್ಕರಿಸಿದರು. 

ವಕೀಲರ ಸಂಘದ ಅಧ್ಯಕ್ಷ ಆರ್. ಕೆ. ನಾಗೇಂದ್ರಬಾಬು ಮಾತನಾಡಿ, ರಾಜ್ಯ ಸರಕಾರದ ನ್ಯಾಯಾಂಗ ಶುಲ್ಕ ಪಾವತಿಯ ಬಗ್ಗೆ ಹೊರಡಿಸಿರುವ ಅಧಿಸೂಚನೆ ಅವಿವೇಚನೆಯಿಂದ ಕೂಡಿದೆ. 

ಕೇಂದ್ರ ಸರಕಾರದ ಈ ಕ್ರಮವನ್ನು ಬೆಂಬಲಿಸಿ ಯಾವುದೇ ಪೂರ್ವಾಪರ ಯೋಜನೆ ಇಲ್ಲದೆ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿರುವುದು ದೊಡ್ಡ ದುರಂತವಾಗಿದೆ. ಇದರಿಂದ ಬಡ ಮತ್ತುಮಧ್ಯಮ ವರ್ಗದವರಿಗೆ ಹೆಚ್ಚಿನ ಅನನುಕೂಲ ಉಂಟಾಗಲಿದೆ. ನ್ಯಾಯಾಂಗ ಶುಲ್ಕ, ದಂಡ ವಿಧಿಸುವ ಮೂಲಕ ರಾಜ್ಯ ಸರಕಾರ ಬಡಜನರ, ಮಧ್ಯಮವರ್ಗದವರಿಗೆ ಹೆಚ್ಚಿನ ಹೊರೆ ಉಂಟುಮಾಡುತ್ತಿದೆ. ಕಾನೂನು ಸೇವಾ ಪ್ರಾಧಿಕಾರವು ಅಸ್ತಿತ್ವಕ್ಕೆ ಬಂದು ಸಾಧ್ಯವಾದಷ್ಟರ ಮಟ್ಟಿಗೆ ಸರಳವಾಗಿ ಕಡಿಮೆ ಖರ್ಚಿನಲ್ಲಿ ಜನರಿಗೆ, ಕಕ್ಷಿದಾರರಿಗೆ ನ್ಯಾಯ ಸಿಗಬೇಕೆಂದು ಯೋಜನೆಗಳನ್ನು ಹೊರತರುತ್ತಿರುವ ಸಂದರ್ಭದಲ್ಲಿ ಈ ಅಧಿಸೂಚನೆಯು ಕಕ್ಷಿದಾರರ ವರ್ಗಕ್ಕೆ ಮಾರಕವಾಗಿರುತ್ತದೆ. ಈ ಕೂಡಲೆ ಈ ಅಧಿಸೂಚನೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಬಡ ಕಕ್ಷಿದಾರರ ಪರವಾಗಿ ಕಲಾಪ ಬಹಿಷ್ಕರಿಸುತ್ತಿರುವುದಾಗಿ ಅವರು ತಿಳಿಸಿದರು. 

ಕುಶಾಲನಗರ ಕಾರ್ಯಪ್ಪ ವತ್ತದಲ್ಲಿ ಮಾನವ ಸರಪಳಿ ರಚಿಸಿದ ಸಂಘದ ಪದಾಧಿಕಾರಿಗಳು ಅಧಿಸೂಚನೆ ರದ್ದುಗೊಳಿಸಬೇಕೆಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. 

ಬಳಿಕ ಕಾಲ್ಮಡಿಗೆಯಲ್ಲಿ ತೆರಳಿ ಅಧಿಸೂಚನೆ ಹಿಂಪಡೆಯಬೇಕೆಂದು ಕಂದಾಯ ಇಲಾಖೆಯ ಉಪತಹಸೀಲ್ದಾರ್ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ವಕೀಲರ ಸಂಘದ ಪದಾಧಿಕಾರಿಗಳಾದ ಕೆ.ಬಿ.ಮೋಹನ್, ಕೆ.ಎಸ್.ರಾಘವೇಂದ್ರ, ಸುಧಾಕರ್, ಸಂತೋಷ್‌ಕುಮಾರ್, ಕೀರ್ತಿರಾಜ್‌ಕುಮಾರ್, ನಂದ, ಅನಂತ್‌ಕುಮಾರ್, ಶರತ್ ಮೊದಲಾದವರಿದ್ದರು. ಕೃಷಿ ಭೂಮಿ ತೆರವು: ಹೋರಾಟದ ಎಚ್ಚರಿಕೆ
. VK

Leave a Reply

Your email address will not be published. Required fields are marked *

*