Home / News / Malnad / ಹೊಲದಲ್ಲೇ ತಿಮ್ಮಣ್ಣ ಅಂತ್ಯಸಂಸ್ಕಾರ  

ಹೊಲದಲ್ಲೇ ತಿಮ್ಮಣ್ಣ ಅಂತ್ಯಸಂಸ್ಕಾರ  

ಬಾಗಲಕೋಟೆ: ಬಾದಾಮಿ ತಾಲ್ಲೂಕಿನ ಸೂಳಿಕೇರಿ­ಯಲ್ಲಿ ಕೊಳವೆಬಾವಿಯಿಂದ  ತಿಮ್ಮಣ್ಣನ ಶವವನ್ನು ಸೋಮ­ವಾರ ಬೆಳ­ಗಿ­ನ­ಜಾವ ಹೊರತೆಗೆದು, ಹೊಲ­­ದ­ಲ್ಲಿಯೇ ಅಂತ್ಯಸಂಸ್ಕಾರ ಮಾಡ­ಲಾಯಿತು.

ಕೊಳವೆಬಾವಿ ಕೊರೆಯುವ ಯಂತ್ರ ಬಳಸಿ ರಿಗ್ಗಿಂಗ್‌ ಕಾರ್ಯಾಚರಣೆ ಮೂಲಕ ಶವವನ್ನು ಬೆಳಗಿನಜಾವ 2 ಕ್ಕೆ ಹೊರ­ತೆಗೆದು, ವೈದ್ಯಕೀಯ ಪರೀಕ್ಷೆಗೆ ಒಳ­ಪಡಿಸಿದ ಬಳಿಕ ಪಾಲಕರಿಗೆ ಹಸ್ತಾಂತ­ರಿಸಲಾಯಿತು.

ಮಗನ ಶವ ನೊೋಡುತ್ತಿದ್ದಂತೆಯೇ ತಂದೆ ಹನುಮಪ್ಪ ಹಟ್ಟಿ, ತಾಯಿ ಸಂಗವ್ವ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಸಚಿವರು, ಶಾಸಕರು, ಅಧಿಕಾರಿಗಳು, ಗ್ರಾಮಸ್ಥರ ಸಮ್ಮುಖದಲ್ಲಿ ಮಧ್ಯರಾತ್ರಿ 2.30ಕ್ಕೆ ಧಾರ್ಮಿಕ ವಿಧಿವಿಧಾನಗಳ ಮೂಲಕ ಅಂತ್ಯಸಂಸ್ಕಾರ ನೆರವೇರಿಸ ಲಾಯಿತು. ತಂದೆಯೇ ಮಗನ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ ದೃಶ್ಯ ಮನ­ಕಲುಕುವಂತಿತ್ತು.

ಉಪಕಾರ ಸ್ಮರಣೆ: ‘ಮಗನ ಶವವನ್ನು ತೆಗೆದುಕೊಟ್ಟು, ನನ್ನ ಮೇಲೆ ಹಾಕಿದ್ದ ಕ್ರಿಮಿನಲ್‌ ಕೇಸ್‌ ಕೈಬಿಟ್ಟು, ಪರಿಹಾರ ನೀಡುವ ಜೊತೆಗೆ ಹಾಳಾದ ಹೊಲವನ್ನ ಸಮತಟ್ಟು ಮಾಡುತ್ತಿರುವ ಸರ್ಕಾರದ ಉಪಕಾರ­ವನ್ನು ಎಂದಿಗೂ ಮರೆಯ­ಲಾರೆ…’ ಎಂದು ಬಾಲಕನ ತಂದೆ ಹನುಮಪ್ಪ ಹಟ್ಟಿ ದುಃಖದ ನಡುವೆಯೇ ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *

*