Just in
Home / 2020 / June / 26

Daily Archives: June 26, 2020

ಯುವಕರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ದುಶ್ಚಟಗಳಿಂದ ದೂರವಿರುವಂತೆ ಡಾ. ವಿ.ಎಸ್. ಸತೀಶ್ ಸಲಹೆ

ಮಡಿಕೇರಿ ಜೂ.26 : ಯುವ ಜನಾಂಗ ಮಾದಕ ವಸ್ತು ಸೇವನೆಯಂತಹ ದುಶ್ಚಟಗಳಿಗೆ ಬಲಿಯಾಗಿ, ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳದೆ ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬದುಕಬೇಕು ಎಂದು ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಅಧಿಕಾರಿ ಆರ್. ಸಂಪತ್ ಕುಮಾರ್ ಅವರು ತಿಳಿಸಿದ್ದಾರೆ.ನಗರದ ಶಕ್ತಿಧಾಮ ಮಾದಕ ವ್ಯಸನಿಗಳ ಸಮಗ್ರ ಪುನರ್ವಸತಿ ಕೇಂದ್ರ ದಲ್ಲಿ ಶುಕ್ರವಾರ ಅಂತರಾಷ್ಟ್ರೀಯ ಮಾದಕ ...

Read More »

ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಾಯಿಯ ಬಗ್ಗೆ ಅವಹೇಳನ ಆರೋಪ : ವಿ.ಪಿ.ಶಶಿಧರ್ ವಿರುದ್ಧ ಬಿಜೆಪಿ ಪ್ರತಿಭಟನೆ

ಮಡಿಕೇರಿ ಜೂ.26 : ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಾಯಿಯ ಬಗ್ಗೆ ಜಿಲ್ಲಾ ಕಾಂಗ್ರೆಸ್ ಪ್ರಮುಖ ವಿ.ಪಿ.ಶಶಿಧರ್ ಅವರು ಅವಹೇಳನಕಾರಿಯಾಗಿ ನಿಂದಿಸಿ ಮಾತನಾಡಿದ್ದಾರೆ ಎನ್ನಲಾದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬಿಜೆಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.ಶುಕ್ರವಾರ ಬಿಜೆಪಿ ಕಾರ್ಯಕರ್ತರು ಸಾಂಕೇತಿಕ ಪ್ರತಿಭಟನೆ ನಡೆಸಿ ಮಡಿಕೇರಿ ನಗರ ಠಾಣೆಯಲ್ಲಿ ಶಶಿಧರ್ ವಿರುದ್ಧ ದೂರು ನೀಡಿದರು. ತಕ್ಷಣ ...

Read More »

ಜಿಲ್ಲೆಯಲ್ಲಿ ದೇವಾಲಯ ದರ್ಶನ ಸಮಯ ಬದಲಾವಣೆ

ಮಡಿಕೇರಿ ಜೂ.26 : ಕೋವಿಡ್-19 ಹಿನ್ನಲೆಯಲ್ಲಿ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು, ದೇವಾಲಯಗಳ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಿರುವಂತೆ, ದೇವಸ್ಥಾನದ ದೈನಂದಿನ ಕಾರ್ಯಗಳು ಎಂದಿನಂತೆ ನಡೆಯಲಿದ್ದು, ಭಕ್ತಾದಿಗಳು/ಯಾತ್ರಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಜೂನ್ 28 ರಿಂದ ಮುಂದಿನ ಹದಿನೈದು ದಿನಗಳವರೆಗೆ ಬೆಳಿಗ್ಗೆ 8.30 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಮಡಿಕೇರಿ ಶ್ರೀ ಓಂಕಾರೇಶ್ವರ ದೇವಾಲಯ ಹಾಗೂ ಭಾಗಮಂಡಲ ...

Read More »

ಜಿಲ್ಲೆಯಾದ್ಯಂತ ಮುಂಗಾರು ಆರಂಭಗೊಂಡಿದ್ದು, ಪ್ರವಾಹ ಪರಿಸ್ಥಿತಿ ನಿಭಾಯಿಸಲು ಅಗ್ನಿಶಾಮಕ ದಳ ಸನ್ನದ್ಧ

ಮಡಿಕೇರಿ ಜೂ.26 : ಜಿಲ್ಲೆಯಾದ್ಯಂತ ಮುಂಗಾರು ಆರಂಭಗೊಂಡಿದ್ದು, ಪ್ರಾಕೃತಿಕ ವೀಕೋಪ ಮತ್ತು ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಅಗ್ನಿಶಾಮಕ ಇಲಾಖೆಯು ಸನ್ನದ್ಧವಾಗಿದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪಿ.ಚಂದನ್ ಅವರು ತಿಳಿಸಿದ್ದಾರೆ.2018 ಮತ್ತು 2019 ರಲ್ಲಿ ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಆಸ್ತಿ-ಪಾಸ್ತಿ ಮತ್ತು ಜೀವ ಹಾನಿಗಳು ಸಂಭವಿಸಿದ್ದವು. ಈ ನಿಟ್ಟಿನಲ್ಲಿ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ...

Read More »

ಇಬ್ಬರು ಮುಸ್ಲಿಂ ಉದ್ಯಮಿಗಳ ಕರೋನಾ ಕಾಲದ ಸೇವೆಯನ್ನು ಮೆಚ್ಚಿ ಅಭಿನಂದನೆ ಸಲ್ಲಿಸಿದ ಬೆಂಗಳೂರು ಪೊಲೀಸ್ ಕಮಿಷನರ್

ಕರೋನಾ ವಿರುದ್ಧದ ಯುದ್ಧಕ್ಕೆ ಶ್ರೀ ಅಜೀಮ್ ಪ್ರೇಮ್ಜಿ ಇದುವರೆಗೆ 1125 ಕೋಟಿ ರೂ. ದಾನ ನೀಡಿರುತ್ತಾರೆ,132 ಮಿಲಿಯನ್ ಯು.ಎಸ್. ಡಾಲರ್ ನೀಡಿರುವುದರಿಂದ ವಿಶ್ವದ ಅತಿದೊಡ್ಡ ಕರೋನಾ ಪರಿಹಾರ ದಾನಿ ಎಂದು ಜಾಗತಿಕವಾಗಿ ಅವರನ್ನು ಕರೆಯಲಾಗುತ್ತಿದೆ.ಲಾಕ್ ಡೌನ್ ನಡೆದ 74 ದಿನಗಳಲ್ಲಿ ಅವರ ತಂಡವು 30 ಲಕ್ಷ ಜನರಿಗೆ ಆಹಾರವನ್ನು ನೀಡಿದೆ. ಇವರನ್ನು ಎರಡು ಬಾರಿ ಪ್ರತಿಷ್ಠಿತ ...

Read More »

ಕೊಡಗು ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಗಳಿಗೆ ಕಳೆದ ಮೂರು ತಿಂಗಳಿನಿಂದ ವೇತನ ನೀಡದೆ ಸತಾಯಿಸಲಾಗುತ್ತಿದೆ

ಮಡಿಕೇರಿ ಜೂ. 26 : ಕೊಡಗು ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಗಳಿಗೆ ಕಳೆದ ಮೂರು ತಿಂಗಳಿನಿಂದ ವೇತನ ನೀಡದೆ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿ, ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ಮತ್ತು ಇತರ ಸಿಬ್ಬಂದಿಗಳ ಸಂಘ (ಸಿಐಟಿಯು ಸಂಯೋಜಿತ) ಜಿ. ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀ ಪ್ರಿಯ ಅವರಿಗೆ ಮನವಿ ಪತ್ರ ಸಲ್ಲಿಸಿದೆ.ಈ ಸಂದರ್ಭ ಸಂಘದ ಅಧ್ಯಕ್ಷ ಪಿ.ಆರ್. ...

Read More »

ಇನ್ನೂ ಜೈಲಿನಲ್ಲೇ ಇರುವ 28 ವರ್ಷದ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿದ್ಯಾರ್ಥಿನಿ ಗುಲ್ಫಿಶಾ ಫಾತಿಮಾ

Courtesy HuffPost

ಫೆಬ್ರವರಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ 52 ಮಂದಿ ಸಾವನ್ನಪ್ಪಿದ ಕೋಮು ಗಲಭೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಏಪ್ರಿಲ್ 9 ರಂದು ಬಂಧಿಸಿರುವ 28 ವರ್ಷದ ಎಂಬಿಎ ಪದವೀಧರರಾದ ಗುಲ್ಫಿಶಾ ಫಾತಿಮಾ ಅವರ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ಮೂರು ವಿಫಲ ಪ್ರಯತ್ನಗಳ ನಂತರ, ದೆಹಲಿ ಹೈಕೋರ್ಟ್ ಮಂಗಳವಾರ ಮಾನವೀಯ ಆಧಾರದ ಮೇಲೆ ಜಾಮೀನು ಪಡೆದ ...

Read More »

ಶ್ರೀಮೃತ್ಯುಂಜಯ ದೇವಸ್ಥಾನ: ಭಕ್ತಾದಿಗಳಿಗೆ ನಿರ್ಬಂಧ

ಮಡಿಕೇರಿ: ಕೊರೊನಾ ಆತಂಕಕಾರಿ ಸನ್ನಿವೇಶದ ಹಿನ್ನೆಲೆ ದಕ್ಷಿಣ ಕೊಡಗಿನ ಬಾಡಗರಕೇರಿಯಲ್ಲಿರುವ ಶ್ರೀಮೃತ್ಯುಂಜಯ ದೇವಸ್ಥಾನಕ್ಕೆ ಭಕ್ತಾದಿಗಳ ಆಗಮನವನ್ನು ನಿರ್ಬಂಧಿಸಲು ಅಲ್ಲಿನ ಗ್ರಾಮಸ್ಥರು ಹಾಗೂ ಸಮಿತಿಯವರು ತೀರ್ಮಾನಿಸಿದ್ದಾರೆ. ದೇವಾಲಯಕ್ಕೆ ಹೊರ ಭಾಗದಿಂದ ಬರುತ್ತಿರುವ ಜನರ ಸಂಖ್ಯೆ ಹೆಚ್ಚಾಗುತಿದ್ದು, ಇದೀಗ ಕೊಡಗಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತಿರುವುದರಿಂದ ಸ್ಥಳೀಯರ ಒತ್ತಾಯದಂತೆ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ಕೆಲವು ದಿನಗಳ ...

Read More »

ಮನುವಿನ ಪ್ರತಿಮೆಯನ್ನು ರಾಜಸ್ಥಾನ ಹೈಕೋರ್ಟ್ ಆವರಣದಿಂದ ತೆಗೆಯಿರಿ – ದಲಿತರಿಂದ ಸೋನಿಯಾ ಗಾಂಧಿಗೆ ಪತ್ರ

ರಾಜಸ್ಥಾನ ಹೈಕೋರ್ಟ್‌ನ ಆವರಣದಲ್ಲಿ ಸ್ಥಾಪಿಸಲಾಗಿರುವ ಮನು ಪ್ರತಿಮೆಯನ್ನು ತೆಗೆಯಬೇಕೆಂದು ಒತ್ತಾಯಿಸಿ ದಲಿತ ಮಾನವ ಹಕ್ಕು ಕಾರ್ಯಕರ್ತೆ ಮಾರ್ಟಿನ್ ಮ್ಯಾಕ್ವಾನ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ. ಮನು ಪ್ರತಿಮೆಯು “ಭಾರತೀಯ ಸಂವಿಧಾನ ಮತ್ತು ದಲಿತರಿಗೆ ಮಾಡಿದ ಅವಮಾನ” ಎಂದು ಪತ್ರದಲ್ಲಿ ಹೇಳಲಾಗಿದೆ ಮತ್ತು ಇದು “ಭಾರತವು ಬೃಹತ್ ರಾಷ್ಟ್ರವಾಗಿ ಬೆಳೆಯಲು ಜಾತಿಯನ್ನು ನಿರ್ನಾಮ ಮಾಡುವ ...

Read More »
error: Content is protected !!