Home / News / Malnad / Kodagu / 28ರ ವರೆಗೆ ಬೇಸಿಗೆ ಕ್ರಿಕೆಟ್ ಶಿಬಿರ

28ರ ವರೆಗೆ ಬೇಸಿಗೆ ಕ್ರಿಕೆಟ್ ಶಿಬಿರ

by malnadnews 7/4/2014

 

ಗೋಣಿಕೊಪ್ಪಲು: ಕೂರ್ಗ್ ಕ್ರಿಕೆಟ್ ಅಕಾಡೆಮಿ ಹಾಗೂ ಕಾಪ್ಸ್ ಶಾಲೆ ಸಂಯುಕ್ತಾಶ್ರಯದಲ್ಲಿ ಗೋಣಿಕೊಪ್ಪಲು ಕಾಪ್ಸ್ ಶಾಲೆ ಮೈದಾನದಲ್ಲಿ ಏ.28ರವರೆಗೆ ಬೇಸಿಗೆ ಕ್ರಿಕೆಟ್ ಶಿಬಿರ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ಕುಮಾರ್ ಅಪ್ಪಚ್ಚು ತಿಳಿಸಿದ್ದಾರೆ. ಕಾಪ್ಸ್ ಶಾಲೆ ಮೈದಾನದಲ್ಲಿ ಇತ್ತೀಚೆಗೆ ತರಬೇತಿ ಶಿಬಿರ ಉದ್ಘಾಟಿಸಿದ ಬಳಿಕ ಶಿಬಿರದ ಬಗ್ಗೆ ಅವರು ಮಾಹಿತಿ ನೀಡಿದರು. ಮಂಗಳೂರಿನಲ್ಲಿ ಅಂತರ ಜಿಲ್ಲಾ ಕ್ರಿಕೆಟ್ ಟೂರ್ನಿ ನಡೆಯಲಿದ್ದು, ಏ.12ರಿಂದ 14ರವರೆಗೆ ಜಿಲ್ಲಾ ಕ್ರಿಕೆಟ್ ತಂಡದ ಆಯ್ಕೆ ಪ್ರಕ್ರಿಯೆ ನಡೆಯಲಿರುವುದಾಗಿ ಅವರು ತಿಳಿಸಿದ್ದಾರೆ. 14 ವಯೋವಾನದ ತಂಡಕ್ಕಾಗಿ ಏ.12ರಂದು ಕಾಪ್ಸ್‌ನಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, 16 ಹಾಗೂ 19ರ ವಯೋವಾನದ ತಂಡದ ಆಯ್ಕೆ ಪ್ರಕ್ರಿಯೆ ಮಡಿಕೇರಿ ಕೊಡಗು ವಿದ್ಯಾಲಯದಲ್ಲಿ ಏ.13 ಹಾಗೂ 14ರಂದು ನಡೆಯಲಿದೆ. ಜಿಲ್ಲಾ ತಂಡಕ್ಕೆ ಆಯ್ಕೆಯಾಗುವ ಪ್ರತಿ ಆಟಗಾರನ ಖರ್ಚನ್ನು ಅಕಾಡೆಮಿ ಹಾಗೂ ಕೆಎಸ್‌ಸಿಎ ಭರಿಸಲಿದೆ ಎಂದು ಕುಮಾರ್ ಅಪ್ಪಚ್ಚು ತಿಳಿಸಿದರು. ಆಯಾಯ ವಯೋವಾನ ತಂಡದ ಆಯ್ಕೆ ಪ್ರಕ್ರಿಯೆ ಅನುಸಾರ ಏ.12ರಿಂದ ಅಕಾಡೆಮಿ ಅಧ್ಯಕ್ಷರನ್ನು ಬೆಳಗ್ಗೆ 8.30ತಿತಬ ಮುನ್ನ ಭೇಟಿಯಾಗಲು ತಿಳಿಸಿದ್ದಾರೆ. ಮಾಹಿತಿಗಾಗಿ ಮೊ.ಸಂಖ್ಯೆ 9448647465 ಅಥವಾ ಕಾಪ್ಸ್ ದೈಹಿಕ ಶಿಕ್ಷಣ ಶಿಕ್ಷಕ ಬಿ.ಎಂ. ಗಣೇಶ್ ಅವರನ್ನು ಖುದ್ದು ಭೇಟಿ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ತಲಾ 15 ಆಟಗಾರರ ತಂಡವನ್ನು ಪ್ರತಿ ವಯೋವಾನದ ಗುಂಪಿಗೆ ಆಯ್ಕೆ ಮಾಡಿಕೊಳ್ಳಲಾಗುವುದು. ಹಾಗೂ ತಂಡವನ್ನು ರಾಯಲ್ ಚಾಲೆಂಜ್ ಕೆಎಸ್‌ಸಿಎ ಕ್ರಿಕೆಟ್ ಅಕಾಡೆಮಿ ಮೂಲಕ ಉಚಿತ ತರಬೇತಿ ನೀಡಲಾಗುತ್ತದೆ. ಏ.15 ಹಾಗೂ 16ರಂದು ಕಾಪ್ಸ್ ಶಾಲೆ ಮೈದಾನದಲ್ಲಿ ಆಯ್ಕೆಯಾದ ಕ್ರೀಡಾಪಟುಗಳಿಗೆ ನೆಟ್ ಅಭ್ಯಾಸ ಏರ್ಪಡಿಸಲಾಗುತ್ತದೆ. 18 ರಿಂದ 25ರವರೆಗೆ ಅಂತರ ಜಿಲ್ಲಾ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲಾಗಿದೆ. ಕುಶಾಲನಗರದ ನಳಂದ ಗುರುಕುಲ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲಿ ಏ.12ರಿಂದ ಅಕಾಡೆಮಿ ವತಿಯಿಂದ ತರಬೇತಿ ಶಿಬಿರ ಆರಂಭಗೊಳ್ಳಲಿದೆ. ಹೆಚ್ಚಿನ ವಿವರಗಳಿಗೆ 08223-258253, 258256 ಅಥವಾ 9448647465 ಸಂಪರ್ಕಿಸಬಹುದು.

ಬೇಗೂರುಕೊಲ್ಲಿ: ಮೇ 4ರಂದು  ಆಟೋಕ್ರಾಸ್

ಮಡಿಕೇರಿ: ಪೊನ್ನಂಪೇಟೆ ಗೋಲ್ಡನ್ ಜೆಸಿಐ ಸಂಸ್ಥೆ ವತಿಯಿಂದ ಮೇ 4ರಂದು ಬೇಗೂರು ಕೊಲ್ಲಿಯಲ್ಲಿ ಎಂಟನೇ ವರ್ಷದ ಜೇಸಿ ಆಟೋಕ್ರಾಸ್-2014 ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಅಧ್ಯಕ್ಷ ನಿರನ್ ಗಣಪತಿ, ಫೆಡರೇಷನ್ ಆಫ್ ಮೋಟಾರ್ ಸ್ಪೋರ್ಟ್ಸ್ ಸಂಸ್ಥೆಯ ಅನುಮತಿಯೊಂದಿಗೆ ಆಯೋಜಿಸಲಾಗಿರುವ ಆಟೋಕ್ರಾಸ್‌ಗೆ ಪೊನ್ನಂಪೇಟೆ- ಹುದಿಕೇರಿ ನಡುವಿನ ಬೇಗೂರುಕೊಲ್ಲಿ ಗದ್ದೆ ಬಯಲಿನಲ್ಲಿ 1.25 ಕಿ.ಮೀ. ಉದ್ದದ ಸುಸಜ್ಜಿತ ಟ್ರ್ಯಾಕ್ ನಿರ್ಮಿಸಲಾಗುತ್ತದೆಂದು ತಿಳಿಸಿದರು. ದ್ವಿಚಕ್ರ ವಿಭಾಗದಲ್ಲಿ ಕೂರ್ಗ್ ಲೋಕಲ್ ಓಪನ್, ಫೋರ್ ಟ್ರೋಕ್ಸ್ ಓಪನ್ ಮತ್ತು ಇಂಡಿಯನ್ ಓಪನ್ ಕ್ಲಾಸ್‌ಗಳಲ್ಲಿ ಮತ್ತು ಚತುಷ್ಚಕ್ರ ವಾಹನಗಳ ವಿಭಾಗದಲ್ಲಿ ಕೂರ್ಗ್ ಲೋಕಲ್ ಓಪನ್, 800 ಸಿಸಿ ಮೇಲ್ಪಟ್ಟ ವಿಭಾಗ, 1001 ಸಿಸಿ ಯಿಂದ 1400 ಸಿಸಿ ಕ್ಲಾಸ್ ಮತ್ತು 1401 ಸಿಸಿಯಿಂದ 1600 ಸಿಸಿ ಕ್ಲಾಸ್‌ಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿದ್ದು, 150ಕ್ಕೂ ಹೆಚ್ಚಿನ ಸ್ಪರ್ಧಾಳುಗಳು ಪಾಲ್ಗೊಳ್ಳುವ ನಿರೀಕ್ಷೆ ಹೊಂದಿರುವುದಾಗಿ ಮಾಹಿತಿ ನೀಡಿದರು.  ದ್ವಿಚಕ್ರ ಮತ್ತು ಚತುಷ್ಚಕ್ರ ವಾಹನಗಳ ಆಟೋಕ್ರಾಸ್‌ನ  ಕೂರ್ಗ್ ಲೋಕಲ್ ಓಪನ್ ವಿಭಾಗ ಕೊಡಗಿನವರಿಗೆ ಸೀಮಿತವಾಗಿ ಆಯೋಜಿಸಲಾಗಿದೆ. ಸ್ಪರ್ಧೆಗಳು ಅಂದು ಬೆಳಗ್ಗೆ 9.30ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಹೆಚ್ಚಿನ ಮಾಹಿತಿಗಳನ್ನು ಜೆಸಿಐ ಅಧ್ಯಕ್ಷರು ಮೊ. ಸಂಖ್ಯೆ 9480440208, ಯೋಜನಾ ನಿರ್ದೇಶಕರು ಮೊ.ಸಂಖ್ಯೆ 9448647711, ಕಾರ್ಯದರ್ಶಿ ಮೊ. ಸಂಖ್ಯೆ 9448587852ನ್ನು ಸಂಪರ್ಕಿಸಬಹುದು. ಸುದ್ದಿಗೋಷ್ಠಿಯಲ್ಲಿ ಜೇಸಿಐ ಸಂಸ್ಥೆಯ ಕಾರ್ಯದರ್ಶಿ ಸಂಜು ಸೋಮಯ್ಯ, ನಿಕಟ ಪೂರ್ವಾಧ್ಯಕ್ಷ ರಾಬಿನ್ ಸುಬ್ಬಯ್ಯ, ಯೋಜನಾ ನಿರ್ದೇಶಕ ಪಿ.ಬಿ. ನಟೇಶ್, ವಲಯ ಸಂಯೋಜಕ ರಾಜಾ ಸುಬ್ಬಯ್ಯ, ಪೂರ್ವಾಧ್ಯಕ್ಷ ಎಂ.ಎಂ. ಅಶೋಕ್ ಇದ್ದರು.

 

(kannadaprabha)

Leave a Reply

Your email address will not be published. Required fields are marked *

*