Just in
Home / News / India / ಒಂದೋ ಭಾರತೀಯ ಸೇನೆಯಲ್ಲಿರು ಅಥವಾ ಫೇಸ್ಬುಕ್ನಲ್ಲಿರು : ದೆಹಲಿ ಹೈಕೋರ್ಟ್

ಒಂದೋ ಭಾರತೀಯ ಸೇನೆಯಲ್ಲಿರು ಅಥವಾ ಫೇಸ್ಬುಕ್ನಲ್ಲಿರು : ದೆಹಲಿ ಹೈಕೋರ್ಟ್

Spread the love

ಜೂನ್ ೬ ರಂದು ಸೇನೆಯು ತನ್ನೆಲ್ಲಾ ಸಿಬ್ಬಂದಿಗಳಿಗೆ ಸಾಮಾಜಿಕ ಜಾಲತಾಣಗಳನ್ನು ಬಳಸಬಾರದು ಎಂಬ ಆದೇಶವನ್ನು ನೀಡಿತ್ತು. ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಸೇರಿದಂತೆ ಒಟ್ಟು ೮೭ ಆಪ್ ಗಳನ್ನು ಸೈನಿಕರು ಬಳಸಬಾರದು ಎಂಬ ಆದೇಶವನ್ನು ನೀಡಿತ್ತು.
ಈ ಆದೇಶವನ್ನು ಪ್ರಶ್ನಿಸಿ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು ಸೇನೆಯ ಹಿರಿಯ ಅಧಿಕಾರಿ ಲೆಫ್ಟಿನಂಟ್ ಪಿ ಕೆ ಚೌಧರಿ, ” ನನ್ನ ಫೇಸ್ಬುಕ್ ನಲ್ಲಿ ಸಾವಿರಾರು ಸ್ನೇಹಿತರಿದ್ದಾರೆ, ಡಿಲೀಟ್ ಮಾಡಿದರೆ ಅವರೆಲ್ಲರೊಂದಿಗಿನ ಸಂಪರ್ಕ ಕಡಿದು ಹೋಗುತ್ತದೆ, ಆದ್ದರಿಂದ ಈ ಆದೇಶವನ್ನು ಪುನರ್ಪರಿಶೀಲಿಸಲು ಸೇನೆಗೆ ಸೂಚಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು”.

ಈ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರುವ ನ್ಯಾಯಮೂರ್ತಿ ರಾಜೀವ್ ಸಹಾಯ್ ಮತ್ತು ಆಶಾ ಮೆನನ್ “ಇದು ಭದ್ರತೆಗೆ ಸಂಬಂಧಪಟ್ಟ ವಿಚಾರವಾಗಿರುವುದರಿಂದ ಡಿಲೀಟ್ ಮಾಡಿ ಮತ್ತು ನಿಮಗೆ ಬೇಕಾದಾಗ ಹೊಸ ಫೇಸ್ಬುಕ್ ಖಾತೆಯನ್ನು ತೆರೆಯಬಹುದು ಎಂದರು, ನೀವೊಂದು ಸಂಸ್ಥೆಯಲ್ಲಿರುವಾಗ ಅದರ ನೀತಿ ನಿಯಮಗಳನ್ನು ಪಾಲಿಸಬೇಕು, ಫೇಸ್ಬುಕ್ ಅಷ್ಟೊಂದು ಆತ್ಮೀಯವಾಗಿದ್ದರೆ ಸೇನೆಗೆ ರಾಜೀನಾಮೆ ಕೊಟ್ಟು ಅದರಲ್ಲೇ ಇರಿ” ಎಂದು ಹೇಳಿದರು.

ಸೇನೆಯ ಜೂನ್ ೬ ತಾರೀಖಿನ ಸುತ್ತೋಲೆಯಿಂದ ಮಧ್ಯಂತರ ಪರಿಹಾರ ನೀಡಬೇಕು ಎಂದು ಸಲ್ಲಿಸಿದ್ದ ಅರ್ಜಿಯ ಮುಂದಿನ ವಿಚಾರಣೆ ಜುಲೈ ೨೧ ಕ್ಕೆ ನಡೆಯಲಿದೆ.

x

Check Also

ಸೂರ್ಯೋದಯ ಫೈನಾನ್ಸ್ ಕಂಪನಿ ಹಾಗೂ ಎಲ್ಎನ್ ಟಿ ಕಂಪನಿಯಿಂದ ಪೀಡನೆ: ಸಾಲ ಮರುಪಾವತಿಗೆ ಕಾಲಾವಕಾಶ ನೀಡಿ

Spread the love ರಾಯಚೂರು: ಸೂರ್ಯೋದಯ ಸಣ್ಣ ಫೈನಾನ್ಸ್ ಮತ್ತು ಎಲ್ಎನ್ಟಿ ಫೈನಾನ್ಸ್ ನಿಂದ ಪಡೆದ ...

ಭಾಗಮಂಡಲದಲ್ಲಿ ಗುಡ್ಡ ಕುಸಿತ ನಾಲ್ವರು ಕಾಣೆ

Spread the love ದಿನಾಂಕ:06-08-2020 ಕೊಡಗು ಜಿಲ್ಲೆಯ ಭಾಗಮಂಡಲ ವ್ಯಾಪ್ತಿಯ ತಲಕಾವೇರಿಯಲ್ಲಿ ನಿನ್ನೆ ತಡರಾತ್ರಿ ಸುರಿದ ...

ಕೊಡಗಿನಲ್ಲಿ ಇಂದು ಬೆಳಿಗ್ಗೆ 9 ಪಾಸಿಟಿವ್ ಪ್ರಕರಣಗಳು

Spread the love 2020 ರ ಆಗಸ್ಟ್ 06, ಬೆಳಿಗ್ಗೆ 07:30 ಕೊಡಗಿನಲ್ಲಿ ಹೊಸ 9 ...

error: Content is protected !!